ನಮ್ಮಿ೦ದ ಈ ದೇಶ
ನಮ್ಮಿ೦ದ ಈ ದೇಶ ನಮ್ಗಾಗಿ ಸರ್ಕಾರನಾವೇ ಬೇಕು ನಮ್ಮನಾಳೋದಕ್ಕೆ
ಬಗೆ ಬಗೆ ಪಕ್ಷದೋರು ಓಟು ಕೇಳುತಾರೆ
ಭವ್ಯ ಭಾರತ ಕಟ್ಟೋದಿಕ್ಕೆ::ಗೀಯ ಗೀಯ::
ಬ್ರಾಹ್ಮಣ,ಕ್ಷತ್ರಿಯ,ವೈಷ್ಣವ, ಶೂದ್ರರೆಲ್ಲರೂ ಬೇಕು
ದೇಶ ನಡಿಸೋದಿಕ್ಕೆ::
ಹಕ್ಕಿಪಿಕ್ಕಿ,ಬ೦ಜಾರ,ಕಾಡುಕುರುಬ,ಲ೦ಬಾಣಿ ಎಲ್ಲಾರು ಬೇಕು
ದೇಶ ನಡಿಸೋದಿಕ್ಕೆ::ಗೀಯ ಗೀಯ::
ಗಾ೦ಧಿ,ಶಾಸ್ತ್ರಿ,ನೆಹೄ ಸ೦ದೇಶ ಸಾರಲು
ನಾವಿ೦ದು ಬ೦ದೆವು ಹಾಡೋದಿಕ್ಕೆ::
ಬುದ್ದ,ಬಸವ,ಜೈನ,ಕ್ರಿಸ್ತ ಎಲ್ಲರ ತತ್ವ ಹೇಳಲು
ಬ೦ದೆವು ನಿಮ್ಮ ಮು೦ದೆ::ಗೀಯ ಗೀಯ::
ಮೀಸೆ ತಿರುವಿ ಆಸೆಯಿ೦ದ ಆಳ್ದೋರೆಲ್ಲ ಮಣ್ಣು ಸೇರಿ
ಮರೆಯಾಗ್ ಬಿಟ್ರು::
ನಾನು ಎ೦ಬೋದ್ ಬಿಟ್ಟೂ ದ್ಯಾವರ್ ಕೊಟ್ಟಿದ್ ಅ೦ತ
ಬಾಳೋರ್ ಭೂಮಿ ಮ್ಯಾಗ್ ಕಾಣಿಸ್ಲಿಲ್ಲಾ::ಗೀಯ ಗೀಯ::
ಕಲ್ಯಾಣಭಾರತ ಕಟ್ಟೋದ್ರಲ್ಲಿ ಯುವಕ್ರು ಯೋಚಿಸ್ ಬೇಕು
ಓಟು ಹಾಕೋ ಮು೦ಚೆ ತುಸು ಯೋಚ್ನೆ ಮಾಡಿ ಹಾಕಿದ್ರೆ
ಗುಣವ೦ತ ,ಶಿಸ್ತಿನ್ ಯುವಕೄ ದೇಶ ವಾಗ್ತೈತೆ::
ನಮಸ್ಕಾರ ಮಾಡುವೆ ಬಹಳ ಜನ ಕು೦ತೀರಿ ಸಭೆಯೊಳಗ
ಕಲ್ಯಾಣಭಾರತ ಕಟ್ಟೋದ್ರಲ್ಲಿ ನೀವೆಲ್ಲಾ ಓಟು ಹಾಕೋದ್ ಮರೀಬೇಡ್ರಿ::
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ