ಸೋಮವಾರ, ಸೆಪ್ಟೆಂಬರ್ 9, 2013

ರಚನೆ :ಪುರಂದರ ದಾಸ

ರಚನೆ :ಪುರಂದರ ದಾಸ 


ಶರಣು ಬೆನಕನೆ ಕನಕರೂಪನೆ ಕಾಮಿನಿ ಸಂಗದೂರನೇ
ಶರಣು ಸಾಂಬನ ಪ್ರೀತಿ ಪುತ್ರನೆ ಶರಣು ಜನರಿಗೆ ಮಿತ್ರನೆ

ಏಕದಂತನೆ ಲೋಕಖ್ಯಾತನೆ ಏಕವಾಕ್ಯ ಪ್ರವೀಣನೇ
ಏಕವಿಂಶತಿ ಪತ್ರಪೂಜಿತನೇಕ ವಿಘ್ನ ವಿನಾಯಕ

ಲಂಬಕರ್ಣನೆ ನಾಸಿಕಾಧರನೆ ಗಾಂಭೀರ್ಯಯುತ ಗುಣಸಾರನೇ
ಕಂಬುಕಂಧರ ಇಂದುಮೌಳಿಜ ಚಂದನಚರ್ಚಿತಾಂಗನೇ

ಚತುರ್ಬಾಹು ಚರಣ ತೊಡಲನೆ ಚತುರ ಆಯುಧ ಧಾರನೇ
ಮತಿಯವಂತನೆ ಮಲಿನ ಜಲಿತನೆ ಅತಿಯ ಮಧುರಾಹಾರನೇ

ವಕ್ರತುಂಡನೆ ಮಹಾಕಾಯನೆ ಅರ್ಕಕೋಟಿ ಪ್ರದೀಪನೇ
ಚಕ್ರಧರ ಹರಬ್ರಹ್ಮಪೂಜಿತ ರಕ್ತ ವಸ್ತ್ರಾಧಾರನೇ

ಮೂಷಿಕಾಸನ ಶೇಷಭೂಷಣ ಅಶೇಷ ವಿಘ್ನವಿನಾಯಕ
ದಾಸ ಪುರಂದರವಿಟ್ಠಲೇಶನ ಈಶಗುಣಗಳ ಪೊಗಳುವೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ